Monday, June 8, 2026
Homeಕರಾವಳಿಉಡುಪಿನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪ:ಮುಂಡಗೋಡ ತಹಶೀಲ್ದಾರ್ ವಿರುದ್ಧ ತನಿಖೆ

ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪ:ಮುಂಡಗೋಡ ತಹಶೀಲ್ದಾರ್ ವಿರುದ್ಧ ತನಿಖೆ

- Advertisement -
- Advertisement -

ಕಾರವಾರ: ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪ ಹಿನ್ನಲೆಯಲ್ಲಿ ತಹಶೀಲ್ದಾರ್ ವಿರುದ್ದ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.‌ ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ತನಿಖೆಗೆ ಅಧಿಕಾರಿಗಳು ತಹಶೀಲ್ದಾರ್ ಮನೆಗೆ ಬಂದಿದ್ದಾರೆ.

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ಪರಿಶಿಷ್ಟ ಪಂಗಡ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪವನ್ನು ತಹಶೀಲ್ದಾರ್ ಶ್ರೀಧರ ಎದುರಿಸುತ್ತಿದ್ದಾರೆ.

ಕಲ್ಬುರ್ಗಿ ವಿಭಾಗದ ಅಧಿಕಾರಿಗಳಿಂದ ತನಿಖೆಗೆ ಬಂದಿದ್ದು, ಯಲಬುರ್ಗಾದಲ್ಲಿ ಫೆಬ್ರವರಿ 12 ರಂದು ಪ್ರಕರಣ ದಾಖಲಾಗಿತ್ತು. ತಹಶೀಲ್ದಾರ್ ಶ್ರೀಧರ 2014 ರ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದಾರೆ.

ಅಧಿಕಾರಿಗಳು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮನೆಯ ಬಾಗಿಲು ತೆಗೆಯದ‌ ಕಾರಣ ಪೊಲೀಸರು ಮನೆಯ ಬಳಿಯೇ ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ. ಬೆಳಿಗ್ಗಿನ ಜಾವ 3 ಘಂಟೆಯಿಂದ‌ ಅಧಿಕಾರಿಗಳು ಕಾಯುತ್ತಿದ್ದು,
ಕಲ್ಬುರ್ಗಿ ಸಿಆರ್ ಸೆಲ್ ಎಸ್ ಪಿ ರಶ್ಮಿ ನೇತೃತ್ವದ ತಂಡ ತನಿಖೆಗೆ ಆಗಮಿಸಿದೆ.

- Advertisement -

Latest News

error: Content is protected !!