Wednesday, June 24, 2026
Homeಕರಾವಳಿಉಡುಪಿಕುಂದಾಪುರ: ಬಾರ್ ನಿಂದ ಹೊರಬರುತ್ತಿದ್ದ ವೇಳೆ ತಂಡದಿಂದ ಹಲ್ಲೆ !

ಕುಂದಾಪುರ: ಬಾರ್ ನಿಂದ ಹೊರಬರುತ್ತಿದ್ದ ವೇಳೆ ತಂಡದಿಂದ ಹಲ್ಲೆ !

- Advertisement -
- Advertisement -

ಕುಂದಾಪುರ: ಬಾರ್ ನಿಂದ ಊಟ ಮಾಡಿ ಹೊರ ಬರುತ್ತಿದ್ದ ರಂಜಿತ್ ಶೆಟ್ಟಿ ಮತ್ತು ಆತನ ಸ್ನೇಹಿತನ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕುಂದಾಪುರದ ಅಂಪಾರುವಿನಲ್ಲಿ ನಡೆದಿದೆ.

ರಂಜಿತ್ ಶೆಟ್ಟಿ ಹಾಗೂ ಆತನ ಸ್ನೇಹಿತ ಅಂಪಾರುವಿನ ಬಾರ್ ವೊಂದರಲ್ಲಿ ಊಟ ಮಾಡಿ ಹೊರಗಡೆ ಬರುತ್ತಿದ್ದಾಗ ಅಭಿಷೇಕ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಮತ್ತೆ ಹಾಲು ಡೈರಿ ಬಳಿ ಹೋಗುತ್ತಿರುವಾಗ ಅಭಿಷೇಕ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಮತ್ತು ಇತರೇ ನಾಲ್ವರು ಸೇರಿ ಹಲ್ಲೆ ಮಾಡಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!