Thursday, June 4, 2026
Homeಕರಾವಳಿಧರ್ಮಸ್ಥಳ ದಿನೇಶ್ ಕೊಲೆ ಪ್ರಕರಣ:ಆರೋಪಿ ಕಿಟ್ಟ@ಕೃಷ್ಣನಿಗೆ ಜಾಮೀನು ಮಂಜೂರು.

ಧರ್ಮಸ್ಥಳ ದಿನೇಶ್ ಕೊಲೆ ಪ್ರಕರಣ:ಆರೋಪಿ ಕಿಟ್ಟ@ಕೃಷ್ಣನಿಗೆ ಜಾಮೀನು ಮಂಜೂರು.

- Advertisement -
- Advertisement -

ಬೆಳ್ತಂಗಡಿ : ಕ್ಷುಲ್ಲಕ ವಿಚಾರಕ್ಕೆ ದಲಿತ ವ್ಯಕ್ತಿಯನ್ನು ಎಳೆದುಕೊಂಡು ಹೋಗಿ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ಕಳೆದ ಫೆ.25 ರಂದು ನಡೆದಿತ್ತು ಇದೀಗ ಆರೋಪಿಗೆ 28 ದಿನದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.

ಘಟನೆ ವಿವರ: ಕನ್ಯಾಡಿಯ ದಿನೇಶ್ ಮೇಲೆ ಧರ್ಮಸ್ಥಳದ ಕಿಟ್ಟ @ ಕೃಷ್ಣ ಜಾಗದ ವಿಚಾರವಾಗಿ ಫೆ.23 ರಂದು ಕನ್ಯಾಡಿ ಲಾಡ್ಜ್ ‌ಮುಂಭಾಗದಿಂದ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದು ನಂತರ ಫೆ.25 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಪ್ರಕರಣ ದಾಖಲಾದ ಮೇಲೆ ಆರೋಪಿ ಕಿಟ್ಟ@ಕೃಷ್ಣ ನನ್ನು ಬಂಧಿಸಲಾಗಿತ್ತು. ಮಾರ್ಚ್ 23 ರಂದು ಮಂಗಳೂರು ಕೋರ್ಟ್ ಜಾಮೀನು ನೀಡಿದ್ದು ಆರೋಪಿ ಇದೀಗ ಜೈಲಿನಿಂದ ಹೊರಬಂದಿದ್ದಾ‌ನೆ.

ತಾಯಿಪತ್ನಿಯಿಗೆ ಜೀವಭಯ: ಆರೋಪಿ ಒಂದು ತಿಂಗಳ ಒಳಗೆ ಹೊರಬಂದಿದ್ದಾನೆ ನಮಗೆ ಈಗ ಜೀವಭಯ ಉಂಟಾಗಿದೆ ಇನ್ನೂ ನಮ್ಮನ್ನು ಕಿಟ್ಟ ಸುಮ್ಮನೆ ಬೀಡುವುದಿಲ್ಲ ,ನಮ್ಮ ಮನೆಗೆ ನುಗ್ಗಿ ಕೊಲೆ‌ ಮಾಡುವ ಸಾಧ್ಯತೆ ಇದೆ ಅದಲ್ಲದೆ ಸಾಕ್ಷಿ ನಾಶ ಮಾಡುತ್ತಾನೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮಾಡಬೇಕೆಂದು ಮನವಿ ಮಾಡಿದ್ದಾರೆ.

ಸರಕಾರ ಹರ್ಷನಿಗೆ ಪರಿಹಾರ ನೀಡಿದ ರೀತಿ‌ ನಮಗೂ ನೀಡಬೇಕು: ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂದಿಸಿದಂತೆ ಸರಕಾರ 25 ಲಕ್ಷ ಪರಿಹಾರ ನೀಡದ್ದಾರೆ ನಾವು ಕೂಡ ಬಡವರು ನಾವು ಹಿಂದೂಗಳು ನಮಗೂ ಪರಿಹಾರ ನೀಡಬೇಕಾಗಿ ಅಗ್ರಹಿಸಿದ್ದಾರೆ.

- Advertisement -

Latest News

error: Content is protected !!