Saturday, October 17, 2026
Homeತಾಜಾ ಸುದ್ದಿಹಾಸನ: ಬಸ್ ಹಾಗೂ ಕಾರು ನಡುವೆ ಢಿಕ್ಕಿ- ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಹಾಸನ: ಬಸ್ ಹಾಗೂ ಕಾರು ನಡುವೆ ಢಿಕ್ಕಿ- ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

- Advertisement -
- Advertisement -

ಹಾಸನ: ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ – ಬೇಲೂರು ರಾಷ್ಟ್ರೀಯ ಹೆದ್ದಾರಿ ಸಂಕೇನಹಳ್ಳಿ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಅಕ್ಮಲ್(18), ಜಿಲಾನಿ(19), ತೋಯಿದ್ (18), ಕೈಫ್ (18) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತರೆಲ್ಲರೂ ಬೇಲೂರು ಪಟ್ಟಣದ ನಿವಾಸಿಗಳು.

ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿಗಳು ಆಲ್ಟೋ ಕಾರಿನಲ್ಲಿ ಹಾಸನಕ್ಕೆ ಬರುತ್ತಿದ್ದಾಗ ಹಾಸನದ ಕಡೆಯಿಂದ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತರು ಬೇಲೂರಿನ ವಿದ್ಯಾ ವಿಕಾಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಬೇಲೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!