Thursday, June 4, 2026
Homeಅಪರಾಧಪುತ್ತೂರಿನ ಕಬಕ ಸರ್ಕಾರಿ ಶಾಲೆಯಿಂದ ಲ್ಯಾಪ್ ಟಾಪ್ ಕಳ್ಳತನ: ಬೆಳಗಾವಿ ಜೈಲಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದ...

ಪುತ್ತೂರಿನ ಕಬಕ ಸರ್ಕಾರಿ ಶಾಲೆಯಿಂದ ಲ್ಯಾಪ್ ಟಾಪ್ ಕಳ್ಳತನ: ಬೆಳಗಾವಿ ಜೈಲಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಪುತ್ತೂರು:   ಕಬಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಲಾಗಿದ್ದು, ಕಳ್ಳತನದ ಆರೋಪಿ ಮಂಜನಾಡಿಯ ಬದ್ರಿಯಾನಗರ ಕಲ್ಕಟ್ಟ ನಿವಾಸಿ ಅಬ್ದುಲ್ ಫಯಾನ್ (22) ಎಂಬಾತನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫಯಾನ್ ಈಗಾಗಲೇ ಬೇರೊಂದು ಪ್ರಕರಣದಲ್ಲಿ ಬೆಳಗಾವಿ ಜೈಲು ಸೇರಿದ್ದು, ಬಾಡಿ ವಾರೆಂಟ್ ಮೂಲಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ವಿಚಾರಣೆ ವೇಳೆ ಫಯಾನ್ ತಪ್ಪೊಪ್ಪಿಕೊಂಡಿದ್ದು, ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿ ಮಂಗಳೂರಿನ ಅಂಗಡಿಯೊಂದಕ್ಕೆ ಮಾರಿದ್ದಾಗಿ ಹೇಳಿದ್ದಾನೆ.ಅದರಂತೆ ಅಂಗಡಿ ಮಾಲೀಕನಿಂದ ಲ್ಯಾಪ್ ಟಾಪ್ ನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!