- Advertisement -
![]()
- Advertisement -
ಬೆಳ್ತಂಗಡಿ : ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಐದು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಉಜಿರೆ ಕ್ರೀಡಾಂಗಣದ ರಸ್ತೆಯ ಗೇಟ್ ಬಳಿ ಕಾಲೇಜ್ ಕಾಣುವಂತೆ ನಿಂತುಕೊಂಡು ಪ್ರತಿಭಟಿಸಿದ್ದಾರೆ. ‘ಹೈಕೋರ್ಟ್ ತೀರ್ಪು ನೀಡಿದೆ, ನ್ಯಾಯ ನೀಡಿಲ್ಲ’, ‘ಸರಕಾರವನ್ನು ಓಲೈಸುವ ತೀರ್ಪು ನಮಗೆ ಒಪ್ಪಲು ಸಾಧ್ಯವಿಲ್ಲ’ ಎಂಬ ಐದು ಭಿತ್ತಿ ಪತ್ರ ತೋರಿಸುವ ಮೂಲಕ ಫೋಟೋ ತೆಗೆಸಿಕೊಂಡಿದ್ದಾರೆ.
ಇದೀಗ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
- Advertisement -


