Thursday, June 4, 2026
Homeಉತ್ತರ ಕನ್ನಡಬಾವಿಗೆ ಬಿದ್ದು ಮೃತಪಟ್ಟ ಮೊಸಳೆ

ಬಾವಿಗೆ ಬಿದ್ದು ಮೃತಪಟ್ಟ ಮೊಸಳೆ

- Advertisement -
- Advertisement -

ಕಾರವಾರ: ಮೊಸಳೆಯೊಂದು ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ.

ದಾಂಡೇಲಿ ಸಮೀಪದ ಐಪಿಎಮ್ ಕಂಪನಿಯ ವಸತಿ ಪ್ರದೇಶದಲ್ಲಿ ಘಟನೆ ನಡೆದಿದ್ದು ಬಾವಿಯಲ್ಲಿ ಸತ್ತ ಮೊಸಳೆ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ಕಾಳಿ ನದಿಯಿಂದ ಜನವಸತಿ ಪ್ರದೇಶದ ಕಡೆಗೆ ಮೊಸಳೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಬಳಿಕ ಪಾಳು ಬಿದ್ದಿರುವ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಸ್ವಲ್ಪ ಪ್ರಮಾಣದ ನೀರಿದ್ದ ಬಾವಿಗೆ ಬಿದ್ದಿದ್ದ ಮೊಸಳೆ, ಆಹಾರ ಸಿಗದೇ ಸಾವನ್ನಪ್ಪಿದ್ದು, ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಜೊತೆ ಸೇರಿ ಬಾವಿಯಿಂದ ಮೃತ ಮೊಸಳೆಯನ್ನು ಮೇಲೆತ್ತಿದ ಅರಣ್ಯ ಇಲಾಖೆ ಸಿಬ್ಬಂದಿ, ನಂತರ ನಿರ್ಜನ ಪ್ರದೇಶದಲ್ಲಿ ಮೊಸಳೆಯ ಅಂತ್ಯಸಂಸ್ಕಾರ ನಡೆಸಿದ್ದಾರೆ. ‌

- Advertisement -

Latest News

error: Content is protected !!