Thursday, June 4, 2026
Homeಕರಾವಳಿಉಡುಪಿರಾಜ್ಯ ಸರಕಾರ ಸ್ಪಂದನ ಶೀಲ ಸರ್ಕಾರ- ಸಚಿವ ಸುನೀಲ್ ಕುಮಾರ್

ರಾಜ್ಯ ಸರಕಾರ ಸ್ಪಂದನ ಶೀಲ ಸರ್ಕಾರ- ಸಚಿವ ಸುನೀಲ್ ಕುಮಾರ್

- Advertisement -
- Advertisement -

ಬೆಳ್ತಂಗಡಿ; ರಾಜ್ಯ ಸರಕಾರ ಸ್ಪಂದನ ಶೀಲ ಸರಕಾರವಾಗಿದ್ದು ಜನರ ಮನೆ ಬಾಗಿಲಿಗೆ ಸರಕಾರಿ ದಾಖಲೆಗಳನ್ನು ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.

ಅವರು ಕುವೆಟ್ಟು ಗ್ರಾಮಪಂಚಾಯತು ಕಚೇರಿಯಲ್ಲಿ ಕಂದಾಯ ದಾಖಲೆ ಮನೆಮನೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಯಾವುದೇ ಸರಕಾರಿ ದಾಖಲೆಗಳಿಗಾಗಿ ಗ್ರಾಮೀಣ ಜನರು ಕಚೇರಿಯಿಂದ ಕಚೇರಿಗೆ ಅಲೆಯುವಂತಹ ಸ್ಥಿತಿಯನ್ನು ಬದಲಿಸುವ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿ ಈ ಯೋಜನೆಯನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಇತರ ಇಲಾಖೆಗಳೂ ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಸರಕಾರವೇ ಜನರ ಮನೆ ಮುಂದೆ ಬಂದು ಕೆಲಸಕಾರ್ಯಗಳನ್ನು ಮಾಡಿಕೊಡಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜಿ ಮಾತನಾಡಿ  ಗ್ರಾ.ಪ.ಅಧ್ಯಕ್ಷರು ಸದಸ್ಯರುಗಳು ಇದ್ದರು.

- Advertisement -

Latest News

error: Content is protected !!