Sunday, June 7, 2026
Homeಅಪರಾಧಕಾಸರಗೋಡು: ಮನೆಗೆ ನುಗ್ಗಿ ಕಳವು ಪ್ರಕರಣ- ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಕಾಸರಗೋಡು: ಮನೆಗೆ ನುಗ್ಗಿ ಕಳವು ಪ್ರಕರಣ- ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

- Advertisement -
- Advertisement -

ಕಾಸರಗೋಡು: ಮನೆಗೆ ನುಗ್ಗಿ ಕಳವು ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸೊಂಕಾಲ್ ನ ಗಲ್ಫ್ ಉದ್ಯೋಗಿ ಜಿ. ಎಂ ಅಬ್ದುಲ್ಲಾ ಎಂಬವರ ಮನೆಗೆ ನುಗ್ಗಿ ಕಳವು ನಡೆಸಿದ್ದಾರೆ. ಉಪ್ಪಳ ಮಜಿಬೈಲ್ ನ ನಿತಿನ್ ಕುಮಾರ್ (48), ಆಲುವಾ ಕುರುಮ್ಮಶ್ಯೇರಿಯ ಅಬ್ದುಲ್ ಜಲಾಲ್(49) ಬಂಧಿತ ಆರೋಪಿಗಳು.

ಜನವರಿ 14 ರಂದು ಕೃತ್ಯ ನಡೆದಿತ್ತು. ಮನೆಯವರು ಬೀಗ ಹಾಕಿ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು ಕೃತ್ಯ ನಡೆಸಿದ್ದರು. ಕಾರು, ಲಕ್ಷಾಂತರ ರೂ. ಬೆಲೆ ಬಾಳುವ ವಾಚ್ ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಲಾಗಿತ್ತು. ಎರಡು ವಾಚ್‌ಗಳನ್ನು ಆರೋಪಿಗಳ ಬಳಿಯಿಂದ ವಶ ಪಡಿಸಿಕೊಳ್ಳಲಾಗಿದೆ. ಕಾರು ಸೇರಿದಂತೆ ಕಳವು ಮಾಡಲಾದ ಇನ್ನಿತರ ಸೊತ್ತುಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!