Friday, June 5, 2026
Homeತಾಜಾ ಸುದ್ದಿಬೆಂಗಳೂರು: ಕ್ಯಾಮರಾ ಬಾಡಿಗೆಗೆ ಪಡೆಯುವ ನೆಪದಲ್ಲಿ ಕಳವು, ಓಎಲ್‌ಎಕ್ಸ್‌ನಲ್ಲಿ ಮಾರಾಟ !

ಬೆಂಗಳೂರು: ಕ್ಯಾಮರಾ ಬಾಡಿಗೆಗೆ ಪಡೆಯುವ ನೆಪದಲ್ಲಿ ಕಳವು, ಓಎಲ್‌ಎಕ್ಸ್‌ನಲ್ಲಿ ಮಾರಾಟ !

- Advertisement -
- Advertisement -

ಬೆಂಗಳೂರು: ಬಾಡಿಗೆಗೆ ಪಡೆಯುವ ನೆಪದಲ್ಲಿ ಕ್ಯಾಮರಾ ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳನೊಬ್ಬನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಲೂರು ಮೂಲದ ಪುರುಷೋತ್ತಮ್‌(26) ಬಂಧಿತ ಆರೋಪಿ. ಈತನಿಂದ ಸುಮಾರು 3.65 ಲಕ್ಷ ರೂ. ಮೌಲ್ಯದ ಐದು ಕ್ಯಾಮರಾ ಹಾಗೂ ಲೆನ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಚಂದ್ರಾಲೇಔಟ್‌ನ ಚೇತನ್‌ ಎಂಬುವವರ ಇಂಪೈಂಟ್‌ ವಿಂಗ್ಸ್‌ ಸ್ಟುಡಿಯೋಗೆ ಈತ ಬಂದು, ಫೋಟೋ ಕ್ಲಾರಿಟಿ ನೋಡುವುದಾಗಿ ಸ್ಟುಡಿಯೋದಿಂದ ಆಚೆ ಬಂದು ಕ್ಯಾಮರಾ ಸಮೇತ ಪರಾರಿಯಾಗಿದ್ದ.

ಮನೆಯವರು ಇವನನ್ನು ಮನೆಯಿಂದ ಹೊರಹಾಕಿದ್ದರು. ಹೀಗಾಗಿ ಆರೋಪಿ ಕೆಲ ವರ್ಷಗಳಿಂದ ಕೋಲಾರದ ಮಾಲೂರಿಗೆ ಬಂದು ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

- Advertisement -

Latest News

error: Content is protected !!