Sunday, June 7, 2026
Homeಕರಾವಳಿಹಿಜಾಬ್ ಆಕ್ಷೇಪಿಸಿದ್ದ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ!

ಹಿಜಾಬ್ ಆಕ್ಷೇಪಿಸಿದ್ದ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ!

- Advertisement -
- Advertisement -

ಮಂಗಳೂರು: ಹಿಜಾಬ್ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಂಗಳೂರಿನ ರಥಬೀದಿಯಲ್ಲಿರುವ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿ ಸಾಯಿ ಸಂದೇಶ್ ಗೆ ಬೆದರಿಕೆ ಹಾಕಲಾಗಿದ್ದು, ವಿದೇಶೀ ಕಾಲ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಮೂಲಕ ಹತ್ತಾರು ಬೆದರಿಕೆ ಬಂದಿದೆ ಎನ್ನಲಾಗಿದೆ.

ನಿನ್ನ ಫುಲ್ ಡಿಟೈಲ್ ಸಿಕ್ಕಿದೆ, ಒಂದು ವಾರದೊಳಗೆ ನಿನ್ನ ಗೇಮ್ ಫಿನಿಶ್ ಮಾಡುತ್ತೇವೆ, ನೀನು ಜಾಸ್ತಿ ದಿನ ಇರಲ್ಲ, ಜೀವದ ಮೇಲೆ ಆಸೆ ಬಿಟ್ಟು ಬಿಡು ಅಂತ ಸಾಲು ಸಾಲು ಮೆಸೇಜ್ ಮೂಲಕ ಬೆದರಿಸಲಾಗಿದೆ.

ಹಿಜಾಬ್ ವಿಚಾರವಾಗಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ಬಂದ ವೇಳೆ ಸಾಯಿ ಸಂದೇಶ್ ಮತ್ತು ಕೆಲವು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಾಯಿ ಸಂದೇಶ್ ಗೆ ಕಾಲೇಜ್ ನಿನ್ನ ಅಪ್ಪಂದಾ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದ ವೀಡಿಯೋ ವೈರಲ್ ಆಗಿತ್ತು.

- Advertisement -

Latest News

error: Content is protected !!