Friday, June 5, 2026
HomeUncategorizedಮದುವೆ ಊಟ ಸೇವಿಸಿ 1200 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

ಮದುವೆ ಊಟ ಸೇವಿಸಿ 1200 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

- Advertisement -
- Advertisement -

ಗುಜರಾತ್‌: ಮೆಹ್ಸಾನಾ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರ ಪುತ್ರನ ವಿವಾಹ ಸಮಾರಂಭದಲ್ಲಿ ಊಟ ಸೇವಿಸಿದ ಸುಮಾರು 1200 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ವಿಸ್ನಾಗರ ತಾಲೂಕಿನ ಸಾವಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಘಟನೆ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಊಟ ಸೇವಿಸಿದ 1200 ಮಂದಿಗೆ ವಾಂತಿ, ಕೆಲವರಿಗೆ ಬೇಧಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ವಿಸ್ನಾಗರ, ಮೆಹ್ಸಾನಾ ಮತ್ತು ವಡ್ನಾಗರದಲ್ಲಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೇವಿಸಿದ ಆಹಾರದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ ಎಂದು ವಿಸ್ನಾಗರ ಗ್ರಾಮೀಣ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!