Monday, June 8, 2026
Homeಕರಾವಳಿಮಂಗಳೂರು: ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯೊಂದಕ್ಕೆ ಬಿದ್ದ ಕಾರು

ಮಂಗಳೂರು: ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯೊಂದಕ್ಕೆ ಬಿದ್ದ ಕಾರು

- Advertisement -
- Advertisement -

ಮಂಗಳೂರು: ಸ್ಮಾರ್ಟ್ ಸಿಟಿ ಹಿನ್ನೆಲೆ ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯೊಂದಕ್ಕೆ ಕಾರು ಬಿದ್ದ ಘಟನೆ ನಗರದ ಕೋಡಿಯಾಲ್ ಗುತ್ತು ಬಳಿಯ ಭಗವತಿ ನಗರದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿಗಾಗಿ ಗುಂಡಿ ಅಗೆಯಲಾಗಿತ್ತು.

ಆದರೆ ಗುಂಡಿಯ ಸುತ್ತಮುತ್ತಾ ಯಾವುದೇ ಬ್ಯಾರಿಕೇಡ್ ಅಳವಡಿಸದ ಕಾರಣ ಗುಂಡಿಯ ಅರಿವೆ ಇಲ್ಲದೆ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದೆ. ಈ ವೇಳೆ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇನ್ನೂ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!