Sunday, June 7, 2026
HomeUncategorizedಮೈಸೂರು: ಗೂಡ್ಸ್ ಮತ್ತು ಬೈಕ್ ಪರಸ್ಪರ ಡಿಕ್ಕಿ; ಬೈಕ್  ಸವಾರ ಸ್ಥಳದಲ್ಲೇ ಮೃತ್ಯು

ಮೈಸೂರು: ಗೂಡ್ಸ್ ಮತ್ತು ಬೈಕ್ ಪರಸ್ಪರ ಡಿಕ್ಕಿ; ಬೈಕ್  ಸವಾರ ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಮೈಸೂರು: ಜಿಲ್ಲೆಯ ವಿಜಯನಗರದಲ್ಲಿ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಪರಸ್ಪರ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
 ಮೃತರನ್ನು ಹುಣಸೂರು ತಾಲ್ಲೂಕಿನ ಮುತ್ತುರಾಯನ ಹೊಸಳ್ಳಿ ನಿವಾಸಿ ಅನಂತೂ ಎಂದು ಗುರುತಿಸಲಾಗಿದೆ. ಮತ್ತು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಡ್ಸ್ ವಾಹನವು ರಿಂಗ್ ರೋಡ್ ಕಡೆಯಿಂದ ವಿಜಯನಗರ ಕಡೆಗೆ ಬರುತ್ತಿದ್ದು, ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ ಎನ್ನಲಾಗಿದೆ.


ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!