Saturday, June 6, 2026
Homeತಾಜಾ ಸುದ್ದಿಬೆಳ್ತಂಗಡಿ: ನೇತ್ರಾವತಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ಯುವಕ ನಾಪತ್ತೆ

ಬೆಳ್ತಂಗಡಿ: ನೇತ್ರಾವತಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ಯುವಕ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ಕಬಕದ ಯುವಕನೋರ್ವ ರವಿವಾರ ಸಂಜೆಯಿಂದ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವಕನನ್ನು ಪುತ್ತೂರು ತಾಲೂಕು ಕಬಕ ನಿವಾಸಿ ಸುಂದರಿ ಎಂಬವರ ಪುತ್ರ ಕಿರಣ್( 20) ಎಂದು ಗುರುತಿಸಲಾಗಿದೆ.

ತನ್ನ ಅಜ್ಜಿಮನೆ ಮುಂಡಾಜೆಯ ಪರಮುಖಕ್ಕೆ ಬಂದಿದ್ದ ಸಂದರ್ಭ ಸಹೋದರನ ಜೊತೆ ನದಿಗೆ ಹೋಗಿದ್ದು ಈ ವೇಳೆ ಆಕಸ್ಮಿಕ ನಡೆದಿದೆ ಎನ್ನಲಾಗಿದೆ. ಸಂಜೆಯೇ ಧರ್ಮಸ್ಥಳ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಹುಡುಕಾಟ ನಡೆದರೂ ಪತ್ತೆಯಾಗಿಲ್ಲ. ಇಂದು ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!