Saturday, June 6, 2026
Homeತಾಜಾ ಸುದ್ದಿಮಂಡ್ಯ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿಗೆ ಬಹುಮಾನಗಳ ಸುರಿಮಳೆ

ಮಂಡ್ಯ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿಗೆ ಬಹುಮಾನಗಳ ಸುರಿಮಳೆ

- Advertisement -
- Advertisement -

ಮಂಡ್ಯ: ಮಂಡ್ಯದಲ್ಲಿ ಕೇಸರಿ ಶಾಲುಗಳನ್ನು ಧರಿಸಿದ ಹುಡುಗರ ಮುಂದೆ ಏಕಾಂಗಿಯಾಗಿ ಅಲ್ಲಾಹು ಅಕ್ಬರ್ ಎಂದು ಧೈರ್ಯದಿಂದ ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಈಗ ಆಕೆಗೆ ಹಲವಾರು ಮುಸ್ಲಿಂ ಮುಖಂಡರು ಮತ್ತು ಜನಪ್ರತಿನಿಧಿಗಳು ಬಹುಮಾನವನ್ನು ನೀಡಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಜೀಷಾನ್ ಸಿದ್ದಿಕ್ಕಿ ಗುರುವಾರ ಮುಸ್ಕಾನ್ ಅವರ ಮನೆಗೆ ಭೇಟಿ ನೀಡಿ ಪ್ರಶಂಸೆ ಸೂಚಿಸಿ ಐಫೋನ್ ಮತ್ತು ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಮತ್ತು ಹಿಜಾಬ್ ಧರಿಸುವ ಹಕ್ಕನ್ನು ತಡೆಯಲು ಯತ್ನಿಸಿದ ಫ್ಯಾಸಿಸ್ಟರ ವಿರುದ್ಧ ನಿಂತ ಕರ್ನಾಟಕದ ಸಿಂಹಿಣಿ ಯನ್ನು ಬೇಟಿಯಾದೆ, ಆಕಿಗೆ ಮೆಚ್ಚುಗೆಯನ್ನು ನೀಡಿದೆ ಮತ್ತು ಅವಳ ಧೈರ್ಯವನ್ನು ಶ್ಲಾಘಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಸ್ಕಾನ್ ಅವರದೂ ತಪ್ಪಿಲ್ಲ, ನನ್ನದು ತಪ್ಪಿಲ್ಲ ಅವರು ಅವರ ಸಂಸ್ಕೃತಿಯoತೆ ನನ್ನ ಬಳಿ ಬಂದು ಜೈ ಶ್ರೀರಾಮ್ ಎಂದು ಕೂಗಿದರು, ನಾನು ನನ್ನ ಧರ್ಮದಂತೆ ಅಲ್ಲಾಹು ಅಕ್ಬರ್ ಎಂದು ಕೂಗಿದೆ ಇದು ನನ್ನ ಧರ್ಮ, ಪ್ರತಿಯೊಬ್ಬರಿಗೂ ಸ್ವಾತಂತ್ರ‍್ಯವಿದೆ ಅದಕ್ಕೆ ವಿರೋಧ ಮಾಡುವಂತಿಲ್ಲ ಎಂದರು.

ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಗೆ 5 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಮುಸ್ಕಾನ್, ನನಗೆ ಅದರ ಕುರಿತು ಗೊತ್ತಿಲ್ಲ, ಆದರೆ ಅದು ವೈರಲ್ ಆಗುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!