Thursday, August 20, 2026
Homeತಾಜಾ ಸುದ್ದಿಬೆಳ್ತಂಗಡಿ: ಬೊಳ್ಮಿನಾರ್ ದರ್ಗಾ ಶರೀಫ್ ವಠಾರಕ್ಕೆ ಹೈಮಾಸ್ಕ್ ದೀಪ ಅಳವಡಿಕೆ

ಬೆಳ್ತಂಗಡಿ: ಬೊಳ್ಮಿನಾರ್ ದರ್ಗಾ ಶರೀಫ್ ವಠಾರಕ್ಕೆ ಹೈಮಾಸ್ಕ್ ದೀಪ ಅಳವಡಿಕೆ

- Advertisement -
- Advertisement -

ಬೆಳ್ತಂಗಡಿ: ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ ಹರೀಶ್ ಕುಮಾರ್ ರವರ ಅನುದಾನದಲ್ಲಿ ಪುದುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಬೊಳ್ಮಿನಾರ್ ದರ್ಗಾ ಶರೀಫ್ ವಠಾರಕ್ಕೆ ಹೈಮಾಸ್ಕ್ ದೀಪ ಅಳವಡಿಕೆ ಕಾರ್ಯಕ್ರಮ ನೆಡಯಿತು.


ಶ್ರೀ ಕೆಹರೀಶ್ ಕುಮಾರ್ ರವರು ದರ್ಗಾ ಸಮೀತಿಯ ಬೇಡಿಕೆಗೆ ತಕ್ಷಣ ಸ್ಪಂದಿಸಿ ತಮ್ಮದೇ ಅನುದಾನದಿಂದ ಹೈಮಾಸ್ಕ್ ದೀಪವನ್ನು ಮಂಜೂರು ಗೊಳಿಸಿ ದೀಪವನ್ನು ಬೆಳಗಿಸಿ ಉದ್ಘಾಟನೆಯನ್ನು ಮಾಡಿದರು.


ಈ ಕಾರ್ಯಕ್ರಮದಲ್ಲಿ ಉಜಿರೆ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ನಮೀತಾ.ಕೆ ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಬಿ ಅಶ್ರಫ್ ನೆರಿಯ, ಉಜಿರೆಯ ಉದ್ಯಮಿಗಳಾದ ಮೋಹನ್ ಶೆಟ್ಟಿಗಾರ್, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಎ.ಪಿ.ಎಂ.ಸಿ ಸದಸ್ಯರಾದ ಅಬ್ದುಲ್ ಗಪೂರ್, ದ. ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಸಬಾಸ್ಟಿನ್ ಪಿ.ಟಿ, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀ ಬೊಮ್ಮಣ್ಣ ಗೌಡ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರೋಹಿ ಜೋಸೆಫ್, ಮಸೀದಿ ಮತ್ತು ದರ್ಗಾ ಸಮಿತಿ ಅಧ್ಯಕ್ಷರಾದ ಸಂಸುದ್ದಿನ್ ಕಾರ್ಯದರ್ಶಿಯಾದ ಸಿದ್ದಿಕ್, ಜುಮ್ಮಾ ಮಸೀದಿ ಖತೀಬರಾದ ಜ. ಮೋಹಿಯದ್ದಿನ್ ಝುಹರಿ. ಅಬ್ದುಲ್ ಅಜಿಜ್ ಬೆಂಜಾಲ್, ಅಬ್ದುಲ್ ರಶೀದ್, ಸಾಬು ಸಾಹೇಬ್, ಅಬ್ದುಲ್ ಸಾಬು ಲಾಲ್ ಮತ್ತು ದರ್ಗಾ ಸಮಿತಿ ಪಧಾದಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!