Thursday, June 4, 2026
Homeಕರಾವಳಿಮಂಗಳೂರು: ಶ್ರೀ ನಾರಾಯಣ ಗುರು ಸ್ವಾಭಿಮಾನಿಯಾತ್ರೆ- ಮೈಕ್ ಹಿಡಿದು ಅತ್ತೇ ಬಿಟ್ಟ ಪೂಜಾರಿ

ಮಂಗಳೂರು: ಶ್ರೀ ನಾರಾಯಣ ಗುರು ಸ್ವಾಭಿಮಾನಿಯಾತ್ರೆ- ಮೈಕ್ ಹಿಡಿದು ಅತ್ತೇ ಬಿಟ್ಟ ಪೂಜಾರಿ

- Advertisement -
- Advertisement -

ಮಂಗಳೂರು: ನಾರಾಯಣ ಗುರುಗಳಿಗೆ ಅವಮಾನ ಆಗಿದೆಯೆಂದು ಬಿಲ್ಲವ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ನಾಯಕರು, ವಿವಿಧ ಸಂಘಟನೆಗಳು ಸೇರಿಕೊಂಡು ನಿನ್ನೆ (ಜನವರಿ ೨೬) ಗಣರಾಜ್ಯ ದಿನವೇ ಮಂಗಳೂರಿನಲ್ಲಿ ಸ್ವಾಭಿಮಾನಿ ನಡಿಗೆಯ ಯಾತ್ರೆ ನಡೆಸಿದ್ದು, ಕೇಂದ್ರ ಸರಕಾರಕ್ಕೆ ಎಚ್ಚರಿಕೆ ರವಾನಿಸಿದೆ.

ಕಾಂಗ್ರೆಸ್ ವತಿಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಗರೋಡಿ ಕ್ಷೇತ್ರದಲ್ಲಿ ನಾರಾಯಣ ಗುರುಗಳಿಗೆ ಪ್ರಾರ್ಥನೆ ನೆರವೇರಿಸಿ, ಟ್ಯಾಬ್ಲೋ ಆರಂಭಿಸಲಾಗಿತ್ತು. ಆ ಟ್ಯಾಬ್ಲೋ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸುತ್ತಾಡಿ, ಸಂಜೆ ಉರ್ವಾ ಸ್ಟೋರಿಗೆ ಬಂದಿದ್ದು ಅಲ್ಲಿಂದ ಕಾಂಗ್ರೆಸ್ ನಾಯಕರು ಕಾಲ್ನಡಿಗೆಯಲ್ಲಿ ಕುದ್ರೋಳಿಗೆ ಆಗಮಿಸಿದ್ದಾರೆ.

ಸಂಜೆ ಏಳು ಗಂಟೆ ಸುಮಾರಿಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದು ಅಲ್ಲಿ ನಾರಾಯಣ ಗುರುಗಳಿಗೆ ಪೂಜೆ ನಡೆಸಲಾಗಿದೆ. ಬಿಲ್ಲವ ಸಂಘಟನೆಗಳ ನಾಯಕರು ಸೇರಿದಂತೆ ಎಲ್ಲರೂ ಅಲ್ಲಿ ಪ್ರಾರ್ಥನೆ ನೆರವೇರಿಸಿದ್ದಾರೆ. ಕೊನೆಗೆ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಸ್ವಾಭಿಮಾನದ ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಲಿದ್ದಾರೆಂದು ಬಿಲ್ಲವ ನಾಯಕರು ಸೂಚನೆ ನೀಡಿದ್ದು, ಹೊರಾಂಗಣದಲ್ಲಿ ಎಲ್ಲರನ್ನೂ ಸೇರುವಂತೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಹೊರಾಂಗಣದಲ್ಲಿ ಸೇರಿದ್ದರು.

ಮೈಕ್ ಹಿಡಿದು ಅತ್ತುಬಿಟ್ಟ ಪೂಜಾರಿ

ಮಾಜಿ ಸಚಿವ ರಮಾನಾಥ ರೈ ಮಾಜಿ ಶಾಸಕರಾದ ಜೆಆರ್ ಲೋಬೊ, ಐವಾನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಸೇರಿದ್ದರು. ಕೊನೆಗೆ ಪೂಜಾರಿಯವರಿಗೆ ಮೈಕ್ ಕೊಟ್ಟು ಧನ್ಯವಾದ ಹೇಳುತ್ತಾರೆಂದು ಪ್ರಕಟಿಸಿದ್ದಾರೆ. ಆದರೆ ವಯಸ್ಸಿನ ಕಾರಣದಿಂದ ಬಳಲುತ್ತಿರುವ ಜನಾರ್ದನ ಪೂಜಾರಿಯವರು ಮೈಕ್ ಹಿಡಿದು ಅತ್ತರು. ಬಳಿಕ ಎಲ್ಲರಲ್ಲೂ ಕ್ಷಮೆ ಯಾಚಿಸಿ, ನಿಮ್ಮಲ್ಲಿ ಅನಾರೋಗ್ಯದಿಂದಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿ ಮಾತನಾಡುತ್ತೇನೆ ಎಂದು ಹೇಳಿ ಮೈಕ್ ನೀಡಿದರು.

ಪೂಜಾರಿಯವರಲ್ಲಿ ನಾರಾಯಣ ಗುರುಗಳನ್ನು ಕಾಣುತ್ತೇವೆ

ಆನಂತರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ನಾರಾಯಣ ಗುರುಗಳನ್ನು ನಾವು ನೋಡಿಲ್ಲ. ಗುರುಗಳನ್ನು ನಾವು ಈಗ ಜನಾರ್ದನ ಪೂಜಾರಿಯವರಲ್ಲಿ ಕಾಣುತ್ತಿದ್ದೇವೆ. ಅವರ ಕರೆಯಂತೆ ನಾವು ಇವತ್ತು ಸೇರಿದ್ದೇವೆ. ನಮಗೆಲ್ಲ ಅವರೇ ನಾರಾಯಣ ಗುರುಗಳು. ಅವರು ಮಾಡಿದ ಕಾರ್ಯಗಳೇ ನಾರಾಯಣ ಗುರುಗಳ ಆದರ್ಶದ ಪಾಲನೆ, ದೇವಸ್ಥಾನದಲ್ಲಿ ಮಾಡಿರುವ ಕ್ರಾಂತಿಕಾರಿ ನಡೆಗಳೇ ಗುರುಗಳ ತತ್ವ ಪಾಲನೆಯಾಗಿತ್ತು ಎಂದರು.

- Advertisement -

Latest News

error: Content is protected !!