Tuesday, June 9, 2026
Homeಕರಾವಳಿಉಡುಪಿಪಡುಬಿದ್ರಿ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ವ್ಯಕ್ತಿಯೋರ್ವನಿಂದ ಚೂರಿ ಇರಿತ

ಪಡುಬಿದ್ರಿ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ವ್ಯಕ್ತಿಯೋರ್ವನಿಂದ ಚೂರಿ ಇರಿತ

- Advertisement -
- Advertisement -

ಪಡುಬಿದ್ರಿ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ’ಸೋಜಾ(35) ಅವರಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗಾಯಾಳು ಮಹಿಳೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿತದ ಚಟ ಹೊಂದಿದ್ದ ನೆರೆಮನೆಯ ವಿನಯ (36) ಎಂಬ ವ್ಯಕ್ತಿಯು ಕ್ಷುಲ್ಲಕ ಕಾರಣಗಳಿಗಾಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ತನ್ನ ಮನೆ ಬಳಿ ಒರ್ವರೊಂದಿಗೆ ಮಾತನಾಡುತ್ತಿದ್ದಾಗ ಏಕಾಏಕಿ ಬಂದ ವ್ಯಕ್ತಿ ಹೊಟ್ಟೆಗೆ ಇರಿದಿದ್ದಾನೆ. ಇನ್ನು ಪಡುಬಿದ್ರೆ ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ರೀನಾ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಪೋಲಿಸರು ಅವರ ಹೇಳಿಕೆಯನ್ನು ಇನ್ನಷ್ಟೆ ಪಡೆದುಕೊಳ್ಳಬೇಕಿದೆ.

- Advertisement -

Latest News

error: Content is protected !!