Sunday, June 7, 2026
Homeತಾಜಾ ಸುದ್ದಿ'ಕಿರಾತಕ' ಸಿನೆಮಾದ ನಿರ್ದೇಶಕ ಪ್ರದೀಪ್ ರಾಜ್ ಕೊರೋನಾ ಸೋಂಕಿಗೆ ಬಲಿ

‘ಕಿರಾತಕ’ ಸಿನೆಮಾದ ನಿರ್ದೇಶಕ ಪ್ರದೀಪ್ ರಾಜ್ ಕೊರೋನಾ ಸೋಂಕಿಗೆ ಬಲಿ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ವುಡ್ ನಿರ್ದೇಶಕ ಪ್ರದೀಪ್ ರಾಜ್ ಇಂದು ಗುರುವಾರ ಕೊರೋನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಮಧುಮೇಹ, ಯಕೃತ್ತು ಸೇರಿದಂತೆ ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಪಾಂಡಿಚೆರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ ಕೊರೋನಾ ಸೋಂಕು ಕೂಡ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಂದು ನಸುಕಿನ ಜಾವ ನಿಧನರಾದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಯಶ್ ನಟನೆಯ ಕಿರಾತಕ ಚಿತ್ರ ಹಿಟ್ ಆಗಿತ್ತು. ನಂತರ ಪ್ರದೀಪ್ ರಾಜ್ ಅಂಜದ ಗಂಡು, ಬೆಂಗಳೂರು-23, ಮಿಸ್ಟರ್ 420, ದುನಿಯಾ ವಿಜಯ್ ನಟನೆಯ ರಜನಿಕಾಂತ್ ಮೊದಲಾದ ಸಿನೆಮಾಗಳನ್ನು ನಿರ್ದೇಶಿಸಿದ್ದರು.

- Advertisement -

Latest News

error: Content is protected !!