Friday, June 5, 2026
Homeಕರಾವಳಿಉಡುಪಿಹೆಬ್ರಿ: 14 ವರ್ಷದ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ !

ಹೆಬ್ರಿ: 14 ವರ್ಷದ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ !

- Advertisement -
- Advertisement -

ಹೆಬ್ರಿಯ ಕೆರೆಬೆಟ್ಟು ಎಂಬಲ್ಲಿ ಇಂದು ಬೆಳಿಗ್ಗೆ ಎಂಟನೇ ತರಗತಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೆರೆಬೆಟ್ಟು ನಿವಾಸಿ ಸತೀಶ್ ಶೆಟ್ಟಿ ಹಾಗೂ ಮಮತಾ ಶೆಟ್ಟಿ ಅವರ ಪುತ್ರ 14 ವರ್ಷದ ಅನ್ವಿತ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು. ಈತ ಹೆಬ್ರಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೆ ತರಗತಿಯಲ್ಲಿ ಕಲಿಯುತ್ತಿದ್ದ.

ಇಂದು ಮುಂಜಾನೆ ಮನೆಯಲ್ಲಿ ಬಾತ್ ರೂಮಿಗೆ ಹೋಗಿದ್ದ, ಕೆಲ ಸಮಯವಾದರೂ ಹೊರಗೆ ಬಾರದ ಕಾರಣ , ಮನೆಯವರು ಅನ್ವಿತ್ ನನ್ನು ಕರೆದಿದ್ದಾರೆ . ಈ ವೇಳೆ ಅನ್ವಿತ್ ಬಾಗಿಲು ತೆರೆಯದಿದ್ದಾಗ ಕಿಟಕಿಯ ಮೂಲಕ ನೋಡಿದಾಗ ಅನ್ವಿತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ.

ಕೂಡಲೇ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ , ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅನ್ವಿತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ . ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!