- Advertisement -
![]()
- Advertisement -
ಮುಲ್ಕಿ: ಯುವಕನೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ಲಿಂಗಪಯ್ಯ ಕಾಡಿನ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಲಿಂಗಪಯ್ಯ ಕಾಡು ನಿವಾಸಿ ಭರತ್ ಭಂಡಾರಿ ಎಂದು ಗುರುತಿಸಲಾಗಿದೆ.
ಯುವಕ ಭರತ್ ಕೆ.ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಸೆಲೂನ್ ಶಾಪ್ ಇಟ್ಟುಕೊಂಡಿದ್ದು, ಜೀವನ ಸಾಗಿಸುತ್ತಿದ್ದರು. ಮೃತ ಭರತ್, ಪತ್ನಿ ಹಾಗು ಎರಡು ವರ್ಷ ಪ್ರಾಯದ ಮಗಳನ್ನು ಅಗಲಿದ್ದಾರೆ.
ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


