Saturday, May 18, 2024
Homeಅಪರಾಧಉಡುಪಿ: ಅಕ್ರಮ ಗಾಂಜಾ ಹಾಗೂ ಹಶೀಶ್ ತೈಲ ಮಾರಾಟ- ಇಬ್ಬರು ಪೊಲೀಸರ ವಶಕ್ಕೆ

ಉಡುಪಿ: ಅಕ್ರಮ ಗಾಂಜಾ ಹಾಗೂ ಹಶೀಶ್ ತೈಲ ಮಾರಾಟ- ಇಬ್ಬರು ಪೊಲೀಸರ ವಶಕ್ಕೆ

spot_img
- Advertisement -
- Advertisement -

ಉಡುಪಿ: ಅಕ್ರಮವಾಗಿ ಗಾಂಜಾ ಹಾಗೂ ಹಶೀಶ್ ತೈಲ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕಲ್ಯಾಣಪುರದ ಗ್ಲಾಡೆನ್ ಕ್ಲೆವಿನ್ ರೋಡ್ರಿಗಸ್ (21) ಮತ್ತು ಅಂಬಾಗಿಲುವಿನ ಪಡು ಪೆರಂಬಳ್ಳಿಯ ಹೃತಿಕ್ ಕೆಎಂ (21) ಎಂದು ಗುರುತಿಸಲಾಗಿದೆ.

ಈ ಘಟನೆಯು ಶಿವಳ್ಳಿ ಗ್ರಾಮದ ಪೆರಂಪಳ್ಳಿ ರೈಲ್ವೇ ಸೇತುವೆ ಬಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ 93 ಗ್ರಾಂ ಗಾಂಜಾ, ಹಶೀಶ್ ತೈಲ ಹಾಗೂ 7 ಸಾವಿರ ಮೌಲ್ಯದ ಮೊಬೈಲ್ ಫೋನ್, ಹಶೀಶ್ ತೈಲ ತುಂಬಲು ಬಳಸುತ್ತಿದ್ದ ಸಣ್ಣ ಬಾಟಲಿಗಳು ಹಾಗೂ ಹೋಂಡಾ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಐಪಿಸಿಯ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!