Friday, June 5, 2026
Homeತಾಜಾ ಸುದ್ದಿನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಢಿಕ್ಕಿ- ಟಾಟಾ ಏಸ್ ಚಾಲಕನಿಗೆ...

ನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಢಿಕ್ಕಿ- ಟಾಟಾ ಏಸ್ ಚಾಲಕನಿಗೆ ಗಂಭೀರ ಗಾಯ

- Advertisement -
- Advertisement -

ನೆಲ್ಯಾಡಿ: ಅಂಚೆ ಇಲಾಖೆಯ ಪಾರ್ಸೆಲ್ ಸಾಗಾಟದ ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಟಾಟಾ ಏಸ್ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾ.ಹೆ ಗೋಳಿತೊಟ್ಟು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಪುತ್ತೂರು ನೆಹರೂನಗರ ನಿವಾಸಿ ರವಿ ಎಂದು ಗುರುತಿಸಲಾಗಿದೆ.

ಇವರು ಸುಬ್ರಹ್ಮಣ್ಯದಿಂದ ನೆಟ್ಟಣ, ಕಡಬ, ಅಲಂಕಾರು, ನೆಲ್ಯಾಡಿಯಿಂದ ಅಂಚೆ ಇಲಾಖೆಯ ಬ್ಯಾಗ್ ಕಲೆಕ್ಟ್ ಮಾಡಿಕೊಂಡು ಪುತ್ತೂರಿಗೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಅಡುಗೆ ಅನಿಲ ಸಿಲಿಂಡರ್ ಸಾಗಾಟದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಚಾಲಕ ರವಿಯವರು ಟಾಟಾ ಏಸ್ ಗಾಡಿಯೊಳಗೆ ಸಿಲುಕಿಕೊಂಡಿದ್ದು, ಹರಸಾಹಸಪಟ್ಟು ಅವರನ್ನು ಹೊರತೆಗೆದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!