Saturday, June 6, 2026
Homeಕರಾವಳಿಮಂಗಳೂರು: ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು !

ಮಂಗಳೂರು: ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು !

- Advertisement -
- Advertisement -

ಮಂಗಳೂರು: ಮಹಿಳೆಯೊಬ್ಬರಿಗೆ ಕಾರು ಢಿಕ್ಕಿ ಹೊಡೆದು ಗಾಯಗೊಂಡಿದ್ದ ಘಟನೆ ಮಂಗಳೂರಲ್ಲಿ ನಡೆದಿದೆ.

ಮಂಗಳೂರು ನಗರದ ಹೊರವಲಯದ ಕಣ್ಣೂರು ಮಸೀದಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿದ್ದು ಅವರು ಗಂಭೀರ ಗಾಯಗೊಂಡಿದ್ದರು.

ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆ ಖತೀಜಮ್ಮ (55). ಬಿ. ಸಿ. ರೋಡ್ ಕಡೆಯಿಂದ ಬಸ್‌ನಲ್ಲಿ ಬಂದ ಅವರು, ಬಸ್‌ನಿಂದ ಇಳಿದು ಹೆದ್ದಾರಿಯ ಒಂದು ಬದಿಯಿಂದ ದಾಟಿ ಇನ್ನೊಂದು ಬದಿಗೆ ದಾಟುತ್ತಿದ್ದರು. ಈ ವೇಳೆಮಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿತ್ತು. ಇದೀಗ ಅವರು ಮೃತ ಪಟ್ಟಿದ್ದಾರೆ.

- Advertisement -

Latest News

error: Content is protected !!