Wednesday, June 3, 2026
Homeಅಪರಾಧಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ- ಆರೋಪಿ ರಾಜೇಶ್ ಭಟ್ ನ್ಯಾಯಾಲಯಕ್ಕೆ ಹಾಜರು..!

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ- ಆರೋಪಿ ರಾಜೇಶ್ ಭಟ್ ನ್ಯಾಯಾಲಯಕ್ಕೆ ಹಾಜರು..!

- Advertisement -
- Advertisement -

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ತಲೆಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್‌.ಎನ್‌. ರಾಜೇಶ್‌ ಭಟ್‌ ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕನಾಗಿದ್ದ ಕೆ.ಎಸ್‌.ಎನ್‌. ರಾಜೇಶ್‌ ಭಟ್ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದ.

ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಆರೋಪಿ ರಾಜೇಶ್ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿತ್ತು. ಬಳಿಕ ನಿರೀಕ್ಷಾಣಾ ಜಾಮೀನು ಅರ್ಜಿ ಜಿಲ್ಲಾ ಹಾಗೂ ಹೈಕೋರ್ಟ್ ನಿಂದಲೂ ಈತನ ಅರ್ಜಿ ಜಾಮೀನು ನಿರಾಕರಣೆಯಾಗಿತ್ತು. ಈ ನಡುವೆ ಜಿಲ್ಲಾ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಜಾಮೀನು ಸಿಗುವಂತೆ ಮಾಡಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ 63 ದಿನಗಳ ಬಳಿಕ ಶರಣಾಗಿದ್ದಾರೆ. ಹೆಚ್ಚಿನ ಮಾಹಿತಿಗೆ `ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!