Thursday, June 4, 2026
Homeಕರಾವಳಿಉಡುಪಿಉಡುಪಿ ಮೂಲದ ಯುವತಿಯನ್ನು ಕೊಂದ ಪ್ರಿಯಕರ !

ಉಡುಪಿ ಮೂಲದ ಯುವತಿಯನ್ನು ಕೊಂದ ಪ್ರಿಯಕರ !

- Advertisement -
- Advertisement -

ಬೆಂಗಳೂರು: ಹಣಕ್ಕಾಗಿ ಪ್ರಿಯಕರ ತನ್ನ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಯಾದ ಯುವತಿಯನ್ನು ಉಡುಪಿ ಮೂಲದ ಗಂಗಾ (34) ಎಂಬ ಮಾಹಿತಿ ಲಭ್ಯವಾಗಿದೆ.

ಕೊಲೆ ಆರೋಪಿ ಶ್ಯಾಮ್‌‌ (27) ದಾಂಡೇಲಿ ಮೂಲದವನಾಗಿದ್ದು, ಯೋಗ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಗಂಗಾ ಆತನ ತರಬೇತಿ ಕೇಂದ್ರದಲ್ಲಿ ಯೋಗ ಕಲಿಯುತ್ತಿದ್ದಳು. ಈ ಸಂದರ್ಭ ಇಬ್ಬರ ನಡುವೆ ಪ್ರೇಮ ಬೆಳೆದಿದೆ. ಗಂಗಾ ಪ್ರತ್ಯೇಕವಾಗಿ ಯೋಗ ತರಗತಿ ಕೂಡ ನಡೆಸುತ್ತಿದ್ದಳು. ಅದಕ್ಕಾಗಿ ಗಂಗಾ ಶ್ಯಾಮನ್‌ನಿಂದ ಗಂಗಾ ಒಂದು ಲಕ್ಷ ಪಡೆದಿದ್ದಳು.

ತಮ್ಮ ಪ್ರೀತಿ ವಿಚಾರದ ಬಗ್ಗೆ ಮನೆಯಲ್ಲಿ ತಿಳಿಸಿದ್ದು, ಇಬ್ಬರ ಮನೆಯಲ್ಲಿ ಒಪ್ಪಿದ ಬಳಿಕ ವಿವಾಹಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಶ್ಯಾಮ್‌‌ ತನ್ನ ಪ್ರೇಯಸಿಗಾಗಿ ರೂಂ ಮಾಡಿಕೊಟ್ಟಿದ್ದ. ಬುಧವಾರ ರಾತ್ರಿ ಮನೆಗೆ ಬಂದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪದಿಂದ ಶ್ಯಾಮ್‌‌ ಗಂಗಾಳ ತಲೆಯನ್ನು ಗೋಡೆಗೆ ಬಡಿದು, ಕತ್ತುಹಿಸುಕಿ ಕೊಂದಿದ್ದಾನೆ, ಅನಂತರ ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ನ್ಯೂ ಟೌನ್‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!