Sunday, June 7, 2026
Homeಕರಾವಳಿಬಂಟ್ವಾಳ: ಕಲ್ಲಿದ್ದಲು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ...!

ಬಂಟ್ವಾಳ: ಕಲ್ಲಿದ್ದಲು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ…!

- Advertisement -
- Advertisement -

ಬಂಟ್ವಾಳ: ಕಲ್ಲಿದ್ದಲು ಸಾಗಾಟದ ಲಾರಿಯೊಂದು ಮಂಗಳೂರು ಬಂದರಿನಿಂದ ಬಳ್ಳಾರಿ ಕಡೆಗೆ ಸಾಗುತ್ತಿದ್ದಗ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ತುಂಬೆ ಎಂಬಲ್ಲಿ ನಡೆದಿದೆ.

ಘಟನೆ ಸಂಭಿವಿಸಿದಾಗ ಲಾರಿಯ ಡಿಸೇಲ್ ಟ್ಯಾಂಕ್ ಗ್ ಹಾನಿಯಾಗಿದ್ದು ರಸ್ತೆಯ ತುಂಬಾ ಹರಿದಿತ್ತು. ಇದರಿಂದ ವಾಹನಗಳ ನಡುವೆ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು ಇದೆ ಎಂದು ಮನಗಂಡ ಎಸ್.ಐ.ರಾಜೇಶ್ ಅವರು ಅಗ್ನಿಶಾಮಕ ದಳದವರನ್ನು ಕರೆಸಿ ನೀರು ಬಿಟ್ಟು ರಸ್ತೆಯಲ್ಲಿ ಹರಿದ್ದಿದ್ದ ಡಿಸೇಲ್ ತೆರವು ಮಾಡಿಸಿದ್ದಾರೆ.

ಈ ಘಟನೆಯಿಂದ ಲಾರಿ ಚಾಲಕನಿಗೆ ಸ್ವಲ್ಪಮಟ್ಟಿನ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಸ್ವಲ್ಪಹೊತ್ತು ರಸ್ತೆಯಲ್ಲಿ ಸಂಚಾರಕ್ಕೆ ಆಡ್ಡಿಯಾಗಿತ್ತು.

- Advertisement -

Latest News

error: Content is protected !!