Saturday, June 6, 2026
Homeಕರಾವಳಿನೆಲ್ಯಾಡಿ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ, ಓರ್ವ ಬೈಕ್ ಸವಾರ ಸಾವು, ಇನ್ನೋರ್ವನ...

ನೆಲ್ಯಾಡಿ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ, ಓರ್ವ ಬೈಕ್ ಸವಾರ ಸಾವು, ಇನ್ನೋರ್ವನ ಸ್ಥಿತಿ ಗಂಭೀರ..!

- Advertisement -
- Advertisement -

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಗೋಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟು ಇನ್ನೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾತ್ರಿ ನಡೆದಿದೆ.

ಇಚ್ಚಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಜಾರ್ಜ್ ಹಾಗೂ ಝಾನ್ಸಿ ದಂಪತಿ ಪುತ್ರ ಅಲ್ಲಿನ್ (23) ಮೃತಪಟ್ಟಿ ವ್ಯಕ್ತಿ . ನೆಲ್ಯಾಡಿ ಗ್ರಾಮದ ಪಡಡ್ಕ ನಿವಾಸಿ ಸೆಬಿನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಅಲ್ಲಿನ್ ತಂದೆ, ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ .

ಸೆಬಿನ್ ಎಂಬುವವರು ನೆಲ್ಯಾಡಿಯಲ್ಲಿ ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ರಾತ್ರಿವೇಳೆ ಅಲ್ಲಿನ್ ಹಾಗೂ ಸೆಬಿನ್‌ರವರು ಕೊರಿಯರ್ ಪಾರ್ಸೆಲ್ ಹಿಡಿದುಕೊಂಡು ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

ಅಲ್ಲಿನ್ ಹಾಗೂ ಸೆಬಿನ್ ಪ್ರಯಾಣಿಸುತ್ತಿದ್ದ ಬೈಕ್ ಮತ್ತು ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ಮಧ್ಯೆ ಸಣ್ಣಂಪಾಡಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ, ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದರು.

ಇಬ್ಬರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಆದರೆ ಗಂಭೀರ ಗಾಯಗೊಂಡಿದ್ದ ಇಚ್ಚಂಪಾಡಿ ನಿವಾಸಿ ಅಲ್ವಿನ್‌ರವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!