Thursday, June 4, 2026
Homeಕರಾವಳಿಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿಗೆ ಹರೀಶ್ ಪುತ್ತೂರು ಆಯ್ಕೆ

ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿಗೆ ಹರೀಶ್ ಪುತ್ತೂರು ಆಯ್ಕೆ

- Advertisement -
- Advertisement -

ಪುತ್ತೂರು: ಕನ್ನಡ ಸಾಹಿತ್ಯ ಸಾಗರ ಸಂಸ್ಥೆ (ರಿ) ರಾಜ್ಯ ಘಟಕ ಚಿತ್ರದುರ್ಗ ಇದರ ವತಿಯಿಂದ ಸಾಧಕರಿಗೆ ಕೊಡಬಯಸುವ “ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿ” ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಯುವ ಬರಹಗಾರ ಹಾಗೂ ವರದಿಗಾರರಾದ ಹರೀಶ್ ಪುತ್ತೂರು ರವರನ್ನು ಆಯ್ಕೆ ಮಾಡಲಾಗಿದೆ.

ನಮ್ಮ ಸಂಸ್ಥೆಯು ಪ್ರತಿವರ್ಷದಂತೆ ಈ ವರ್ಷವೂ ಸಹ ಕನ್ನಡಮ್ಮನ ಸೇವಾ ಕಾರ್ಯ ಮಾಡಲು ಮುಂದಾಗಿದ್ದು ಈ ಬಾರಿ ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಆಯೋಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹರೀಶ್ ಕೊಡಿಯಾಲ ಗ್ರಾಮದ ಬಾಬು ಎಚ್ ಆರ್ ಮತ್ತು ಕಮಲ ದಂಪತಿಯ ಪುತ್ರರಾಗಿದ್ದು ಖಾಸಾಗಿ ಸುದ್ದಿ ವಾಹಿನಿಯೊಂದರ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!