Thursday, June 4, 2026
Homeಕರಾವಳಿಸುಳ್ಯ: ಹಿರಿಯ ಪತ್ರಕರ್ತ ವಾಗೀಶ್ ನಿಧನ !

ಸುಳ್ಯ: ಹಿರಿಯ ಪತ್ರಕರ್ತ ವಾಗೀಶ್ ನಿಧನ !

- Advertisement -
- Advertisement -

ಸುಳ್ಯ: ಹೊಸದಿಗಂತ ಮತ್ತು ಜನವಾಹಿನಿಯಲ್ಲಿ ಮಂಗಳೂರು ಕಚೇರಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ ಸುಳ್ಯ ಮೂಲದ ಪತ್ರಕರ್ತ ವಾಗೀಶ್ (46) ನಿಧನರಾಗಿದ್ದಾರೆ.

ಇವರು, ಈಟಿವಿ, ಟಿವಿ 9, ಕಸ್ತೂರಿ ನ್ಯೂಸ್, ಸಮಯ ಟಿವಿ, ಪ್ರಜಾ ಟಿವಿಯಲ್ಲೂ ಸುದ್ದಿ ಮನೆಯ ಪ್ರಮುಖರಾಗಿ ಸೇವೆ ಸಲ್ಲಿಸಿದ್ದರು.

ಅದಾದನಂತರ ವಿಜಯ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದರು. ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಹಲವು ಉದ್ಯೋನ್ಮುಖ ಪತ್ರಕರ್ತರನ್ನು ಬೆಳೆಸಿದ ಕೀರ್ತಿ ಇವರದು.

- Advertisement -

Latest News

error: Content is protected !!