Monday, June 8, 2026
HomeಇತರFMS ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಸುಂದರ ಶೆಟ್ಟಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ವರ್ಗಾವಣೆ.

FMS ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಸುಂದರ ಶೆಟ್ಟಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ವರ್ಗಾವಣೆ.

- Advertisement -
- Advertisement -

ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಈ ಹಿಂದೆ ಪೋಲಿಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದ ಸುಂದರ ಶೆಟ್ಟಿ ಯವರು ಬಡ್ತಿಗೊಂಡು ಪುತ್ತೂರು ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆಗೊಂಡಿದ್ದರು.ವಿವಿಧ ಠಾಣೆಗಳಲ್ಲಿರುವಾಗ ಹಲವಾರು ಗಂಭೀರ ಸ್ವರೂಪದ ಕೇಸ್ ಗಳನ್ನು ಪತ್ತೆಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇತ್ತಿಚೆಗೆ ಆನೆಯ ದಂತ ದಂಧೆ ಸೇರಿದಂತೆ ಜಿಂಕೆ ಚರ್ಮ , ಶ್ರೀಗಂಧ , ಇರ್ತಾಳೆ ಹಾವಿನ ಪತ್ತೆ ಕಾರ್ಯದಲ್ಲಿ ತೊಡಗಿ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮಗಳ ಪರಿಚಯ ಸೇರಿದಂತೆ ಜನತೆಯೊಂದಿಗೆ ಅನನ್ಯತೆಯಿಂದಿರುವ ಹೆಡ್ ಕಾನ್ಟೇಬಲ್ ಸುಂದರ ಶೆಟ್ಟಿ ಯವರು.

ಪುತ್ತೂರಿನಲ್ಲಿ ಕಾರ್ಯಚರಿಸುತ್ತಿದ್ದ ಅರಣ್ಯ ಸಂಚಾರಿ ದಳವನ್ನು(FMS) ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಗೊಂಡ ಕಾರಣ ಬೆಳ್ತಂಗಡಿ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

- Advertisement -

Latest News

error: Content is protected !!