Saturday, June 6, 2026
Homeತಾಜಾ ಸುದ್ದಿತಾಯಿಯಾಗುತ್ತಿರುವ ಚೆಲುವಿನ ಚಿತ್ತಾರ ಬೆಡಗಿ !

ತಾಯಿಯಾಗುತ್ತಿರುವ ಚೆಲುವಿನ ಚಿತ್ತಾರ ಬೆಡಗಿ !

- Advertisement -
- Advertisement -

“ಚೆಲುವಿನ ಚಿತ್ತಾರ” ಚಲನಚಿತ್ರ ನಟಿ ಅಮೂಲ್ಯ ಅವರು ತಾಯಿಯಾಗಲಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾವು ಇಬ್ಬರಲ್ಲ ಮೂವರು ಎಂದು ಅಮೂಲ್ಯ ಮಾಹಿತಿ ನೀಡಿದ್ದಾರೆ.

ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅಮೂಲ್ಯ ಅವರೇ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ‘ಸದ್ಯ ನಾವು ಈಗ ಇಬ್ಬರಲ್ಲ, 2022ರಲ್ಲಿ ಮೂವರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಅಮೂಲ್ಯ ಈ ರೀತಿ ಬರೆದುಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಶುಭ ಹಾರೈಸಲು ಶುರು ಮಾಡಿದ್ದಾರೆ.

2017ರಲ್ಲಿ ಉದ್ಯಮಿ ಜಗದೀಶ್‌ ಆರ್ ಚಂದ್ರ ಜೊತೆ ದಾಂಪತ್ಯ ಜೀವನ ಆರಂಭಿಸುತ್ತಾರೆ ಅದಾದ ಬಳಿಕ ಅಮೂಲ್ಯಾ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಅಂದಿನಿಂದ ಇಂದಿನವರೆಗೆ ಅಮೂಲ್ಯಾ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಈಗ ಇವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

- Advertisement -

Latest News

error: Content is protected !!