Thursday, June 4, 2026
Homeಕರಾವಳಿಕಾಸರಗೋಡು: 128 ಕಿಲೋ ಗಾಂಜಾ ಸಾಗಾಟ, ಓರ್ವ ಬಂಧನ

ಕಾಸರಗೋಡು: 128 ಕಿಲೋ ಗಾಂಜಾ ಸಾಗಾಟ, ಓರ್ವ ಬಂಧನ

- Advertisement -
- Advertisement -

128 ಕಿಲೋ ಗಾಂಜಾ ಸಾಗಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಆದೂರು ಪೊಲೀಸರು ಮತ್ತು ಮಾದಕ ದ್ರವ್ಯ ತಂಡ ಬಂಧಿಸಿದೆ.

ನಗರದ ವಿದ್ಯಾನಗರ ನಿವಾಸಿ ಜುಬೇರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ ಅಡೂರು ಬಳಿ ಕಾರನ್ನು ಅಡ್ಡಗಟ್ಟಿ ಕೂಲಂಕುಷವಾಗಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.

ಗಾಂಜಾವನ್ನು ಪ್ಯಾಕೆಟ್‌ಗಳಲ್ಲಿ ತುಂಬಿ ಕಾಸರಗೋಡಿಗೆ ಸಾಗಿಸಲಾಗುತ್ತಿತ್ತು. ಗಾಂಜಾವನ್ನು ಮೂಲತಃ ಆಂಧ್ರದಿಂದ ಸರಬರಾಜು ಮಾಡಲಾಗುತ್ತಿದ್ದು, ಕಾಸರಗೋಡಿನ ವಿವಿಧೆಡೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಮಂಗಳೂರು ಮೂಲಕ ಕಾಸರಗೋಡಿಗೆ ತರಲಾಗುತ್ತಿದ್ದ 114 ಕಿಲೋ ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಸಂದರ್ಭದಲ್ಲೂ ಆಂಧ್ರದಿಂದ ಗಾಂಜಾ ಪೂರೈಕೆಯಾಗುತ್ತಿತ್ತು. ಈ ಸಂಬಂಧ ಚಟ್ಟಂಗುಯಿ ನಿವಾಸಿ ಅಜ್ಮಲ್ ಎಂಬಾತನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!