Sunday, May 5, 2024
Homeಅಪರಾಧಲವ್, ಸೆಕ್ಸ್ ದೋಖಾ ಆರೋಪ: ಕಲಬುರಗಿ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ವಿರುದ್ಧ ದೂರು ನೀಡಿದ...

ಲವ್, ಸೆಕ್ಸ್ ದೋಖಾ ಆರೋಪ: ಕಲಬುರಗಿ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ವಿರುದ್ಧ ದೂರು ನೀಡಿದ ಯುವತಿ …!

spot_img
- Advertisement -
- Advertisement -

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಲವ್, ಸೆಕ್ಸ್, ಧೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ಕೈಕೊಟ್ಟಿದ್ದಾರೆಂದು ನವದೆಹಲಿ ಮೂಲದ ಯುವತಿ ಟ್ವೀಟ್​ ಮಾಡುವ ಮೂಲಕ ಆರೋಪಿಸಿದ್ದಾಳೆ.

ಸ್ನೇಹಲ್ ಸುಧಾಕರ್ ಗೆ 2017ರಲ್ಲಿ ಯುಪಿಎಸ್ಸಿ ತರಬೇತಿ ವೇಳೆ ಯುವತಿಯೋರ್ವಳ ಜೊತೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಬಳಿಕ ಪ್ರೇಮಾಂಕುರವಾಗಿತ್ತು. ಬಳಿಕ ಯುವತಿಯ ಜೊತೆ ಸಲುಗೆಯಿಂದಿದ್ದು, ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬಳಿಕ ಮದುವೆಯಾಗುವಂತೆ ಕೇಳಿದಾಗ ನಿರಾಕರಿಸಿದ್ದಾನೆಂದು ಹೇಳಿದ್ದಾರೆ.

ಈತನ ಜೊತೆಗಿನ ಸಂಬಂಧದ ಬಗೆಗೆ ದಾಖಲೆಯನ್ನು ಕೂಡ ಯುವತಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ವಿವಿಧ ಲಾಡ್ಜ್ ಗಳಲ್ಲಿ ದೈಹಿಕ ಸಂಪರ್ಕ ಬೆಳೆಸಿರುವ ಬಗ್ಗೆ ಯುವತಿ ಮಾಹಿತಿ ನೀಡಿದ್ದಾಳೆ. ಐಎಎಸ್ ಅಧಿಕಾರಿ ಎಂಬ ಪದವಿ ಬಳಸಿ ವಿವಿಧ ಮಹಿಳೆಯರ ಜೊತೆ ಇದೇ ರೀತಿ ಈತ ಚಕ್ಕಂದವಾಡಿರುವ ಬಗ್ಗೆ ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಪ್ರಧಾನಿ, ಗೃಹಸಚಿವರು, ಕರ್ನಾಟಕದ ಸಿಎಂ ಸೇರಿ ಯುವತಿ ಹಲವರಿಗೆ ದೂರು ನೀಡಿದ್ದಾಳೆ.

ಯುವತಿ ಟ್ವಿಟರ್ ದೂರು ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿದ್ದು, ಐಎಎಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಯುವತಿ ದೂರಿನ ಕುರಿತು ಈವರೆಗೆ ಸ್ನೇಹಲ್​ ಲೋಖಂಡೆ ಏನೂ ಹೇಳಿಕೆ ನೀಡಿಲ್ಲ. ಇನ್ನೊಂದೆಡೆ ಯುವತಿ ಶೀಘ್ರ ಬೆಂಗಳೂರಿಗೆ ಬಂದು ಮತ್ತೊಂದು ದೂರು ಕೊಡುವ ಹಾಗೂ ಸಿಎಂ ಭೇಟಿ ನೀಡುವ ಸಾಧ್ಯತೆ ಇದ್ದು, ಇಡೀ ಪ್ರಕರಣ ಇದೀಗ ಕುತೂಹಲ ಕೆರಳಿಸಿದೆ

- Advertisement -
spot_img

Latest News

error: Content is protected !!