Wednesday, June 24, 2026
Homeಕರಾವಳಿಮಂಗಳೂರು: ಕಣಜಗಳ ಹಿಂಡು ದಾಳಿ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಸಾವು !

ಮಂಗಳೂರು: ಕಣಜಗಳ ಹಿಂಡು ದಾಳಿ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಸಾವು !

- Advertisement -
- Advertisement -

ಕಣಜಗಳ ಹಿಂಡು ದಾಳಿ ಮಾಡಿ ಕಚ್ಚಿದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಿನ್ನಿಗೋಳಿ ರಾಮಮಂದಿರ ಬಳಿ ಈ ಘಟನೆ ನಡೆದಿದೆ.ಕಟೀಲು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತರು.

ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಕಣಜಗಳ ಹಿಂಡು ಸಮೀಪದ ಶಾಲೆಯ ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡಿದೆ. ಸಂತೋಷ್ ಅವರು ಮಕ್ಕಳನ್ನು ರಕ್ಷಿಸಿ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳಿಗೆ ಸಹಾಯ ಮಾಡುವಾಗ ಹಲವಾರು ಕಣಜಗಳು ಸಂತೋಷ್‌ಗೆ ಕುಟುಕಿದ್ದವು. ಆದರೆ ಸಂತೋಷ್ ಚಿಕಿತ್ಸೆ ಪಡೆದಿಲ್ಲ. ಅವರು ನೇರವಾಗಿ ಮನೆಗೆ ಹೋದರು.

ರಾತ್ರಿ ಮನೆಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಮೃತಪಟ್ಟರು. ಸಂತೋಷ್ ಪತ್ನಿ, ತಾಯಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!