Thursday, September 10, 2026
Homeಕರಾವಳಿಉಡುಪಿಬಿರುಕು ಬಿಟ್ಟ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ !

ಬಿರುಕು ಬಿಟ್ಟ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ !

- Advertisement -
- Advertisement -

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕರಾವಳಿ ಭಾಗದ ಜನರಿಗೆ ಭೀತಿ ಉಂಟಾಗಿದೆ. ಕರಾವಳಿ, ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ಬಿರುಕುಬಿಟ್ಟಿದೆ.

2 ವರ್ಷದ ಹಿಂದೆ ಘಾಟಿಯಲ್ಲಿ ರಸ್ತೆ ಕುಸಿದು 1 ತಿಂಗಳು ಸಂಚಾರ ಬಂದ್ ಆಗಿತ್ತು. ಹೆಬ್ರಿ ಹಾಗೂ ಆಗುಂಬೆಯಲ್ಲಿ ನಿರಂತರ ಸುರಿದ ಭಾರಿ ಮಳೆಗೆ ಘಾಟಿಯ ಮಣ್ಣು ಸಡಿಲಗೊಂಡ ಕಾರಣ ಅಲ್ಲಲ್ಲಿ ರಸ್ತೆ ಬಿರುಕುಬಿಟ್ಟಿದೆ. ಇಲ್ಲಿ ಕುಸಿಯುವ ಭೀತಿ ಎದುರಾಗಿದ್ದು, ಜನರಿಗೆ ಓಡಾಡುವಾಗ ಭಯ ಕಾಡಿದೆ.

ಘಾಟಿಯ 12 ಹಾಗೂ 13ನೇ ತಿರುವಿನ ಮಧ್ಯೆಯ ರಸ್ತೆ ಬಿರುಕು ಬಿಟ್ಟಿದ್ದು, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.

- Advertisement -

Latest News

error: Content is protected !!