Wednesday, June 3, 2026
Homeಕರಾವಳಿದಕ್ಷಿಣಕನ್ನಡ: ಅನಾಹುತದಿಂದ ಪಾರಾದ ಗ್ಯಾಸ್ ಟ್ಯಾಂಕರ್ !

ದಕ್ಷಿಣಕನ್ನಡ: ಅನಾಹುತದಿಂದ ಪಾರಾದ ಗ್ಯಾಸ್ ಟ್ಯಾಂಕರ್ !

- Advertisement -
- Advertisement -

ದಕ್ಷಿಣಕನ್ನಡ: ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹೋಗಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಎಂಬಲ್ಲಿ ಇಂದು ನಡೆದಿದೆ.

ಪಾಣೆಮಂಗಳೂರು ಮಾರುತಿ ಸುಜುಕಿ ಶೋ ರೂಂ ಸಮೀಪ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದೆ.

ಪಾಣೆಮಂಗಳೂರು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದ ಲಾರಿ ರಸ್ತೆಯ ಪಕ್ಕ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿತ್ತು. ಕ್ರೇನ್ ಬಳಸಿ ಗ್ಯಾಸ್ ಟ್ಯಾಂಕರ್ ನ್ನು ಮೇಲಕ್ಕೆತ್ತಲಾಯಿತು.

- Advertisement -

Latest News

error: Content is protected !!