Thursday, June 4, 2026
Homeಕರಾವಳಿಉಡುಪಿಉಡುಪಿ: ಲಾರಿ ಹರಿದು ಬಾಲಕಿ ಸಾವು, ತಾಯಿ ಅಪಘಾತದಿಂದ ಪಾರು !

ಉಡುಪಿ: ಲಾರಿ ಹರಿದು ಬಾಲಕಿ ಸಾವು, ತಾಯಿ ಅಪಘಾತದಿಂದ ಪಾರು !

- Advertisement -
- Advertisement -

ಉಡುಪಿ : ಲಾರಿ ಹರಿದು ಬಾಲಕಿ ಓರ್ವಳು ದಾರುಣವಾಗಿ ಸಾವನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಅಂಬಾಗಿಲು ಬಳಿ ಈ ಘಟನೆ ಇಂದು ಸಂಭವಿಸಿದೆ. ಡಿಕ್ಕಿ ಹೊಡೆದ ಲಾರಿ ಸಿಮೆಂಟ್ ಮಿಕ್ಸಿಂಗ್ ಲಾರಿ ಎಂದು ತಿಳಿದುಬಂದಿದೆ. ಮೃತ ಬಾಲಕಿಯನ್ನು ಎಂಟು ವರುಷದ ಪ್ರಣಮ್ಯ ಎಂದು ಗುರುತಿಸಲಾಗಿದೆ.

ಪ್ರಣಮ್ಯ ಹಾಗೂ ತಾಯಿ ಸ್ಕೂಟರ್ ನಲ್ಲಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ತಾಯಿ ಹಾಗೂ ಮಗಳು ಇಬ್ಬರೂ ರಸ್ತೆಗೆ ಬಿದ್ದಿದ್ದರು.

ಆದರೆ ಬಾಲಕಿ ಪ್ರಣಮ್ಯ ಮೇಲೆ ಲಾರಿ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಸಾವು ಬದುಕಿನ ನಡುವೆ ಹೋರಾಡಿದ ಪ್ರಣಮ್ಯ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹಾಗೇ ಮೃತ ಬಾಲಕಿಯ ತಾಯಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!