Saturday, June 6, 2026
HomeUncategorizedಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿ ರಾಜು ಹೊಸ್ಮಠ ಪರಾರಿಯಾಗಲು ಸಹಕರಿಸಿದ ಇಬ್ಬರ ಬಂಧನ

ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿ ರಾಜು ಹೊಸ್ಮಠ ಪರಾರಿಯಾಗಲು ಸಹಕರಿಸಿದ ಇಬ್ಬರ ಬಂಧನ

- Advertisement -
- Advertisement -

ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿ ದಲಿತ ಸಂಘಟನೆಯ ಮಖಂಡ ರಾಜು ಹೊಸ್ಮಠ ಪರಾರಿಯಾಗಲು ಸಹಕರಿಸಿದ ಕಾರಣಕ್ಕೆ ಉಜಿರೆಯ ಗಣೇಶ್ ಮತ್ತು ಮೂಡಿಗೆರೆಯ ಲಿಂಗಪ್ಪ ಎಂಬವರನ್ನು ಪುತ್ತೂರು ಮಹಿಳಾ ಠಾಣಾ ಪೋಲಿಸರು ಬಂಧಿಸಿದ್ದಾರೆ.


ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಿಂದ ರಾಜು ಹೊಸ್ಮಠ ವಿರುದ್ಧ ಪೋಕ್ಸೋ ಕಾಯಿದೆಯಡಿ ಕೇಸು ದಾಖಲಾಗಿತ್ತು. ಇದರಿಂದ ಅವರು ತಲೆಮರೆಸಿಕೊಂಡಿದ್ದರು. ರಾಜು ಹೋಸ್ಮಠ ಅವರನ್ನು ಕಾರಿನಲ್ಲಿ ಮೂಡಿಗೆರೆಗೆ ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆರೋಪಿಗೆ ತಲೆಮರಿಸಿಕೊಳ್ಳಲು ಸಹಕರಿಸಿದ ಆರೋಪದಿಂದ ಗಣೇಶ್ ಮತ್ತು ಲಿಂಗಪ್ಪರವರನ್ನು ಬಂಧಿಸಲಾಗಿದೆ. ಅಲ್ಲದೆ ರಾಜು ಹೊಸ್ಮಠರವರ ಭಂಧನಕ್ಕಾಗಿ ಪೋಲಿಸರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!