Wednesday, October 14, 2026
HomeUncategorizedಬಂಟ್ವಾಳ: ಸಿಡಿಲು ಬಡಿದು ಸುಟ್ಟು ಕರಕಲಾದ ಪಂಪ್ ಶೆಡ್, ಲಕ್ಷಾತರ ರೂ. ನಷ್ಟ

ಬಂಟ್ವಾಳ: ಸಿಡಿಲು ಬಡಿದು ಸುಟ್ಟು ಕರಕಲಾದ ಪಂಪ್ ಶೆಡ್, ಲಕ್ಷಾತರ ರೂ. ನಷ್ಟ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಪಂಪ್ ಶೆಡ್ ಗೆ ಸಿಡಿಲು ಬಡಿದು ಸಂಪೂರ್ಣವಾಗಿ ಭಸ್ಮಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.


ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಎಂಬವರ ತೋಟದಲ್ಲಿ ರಾತ್ರಿ ವೇಳೆ ಸಿಡಿಲು ಬಡಿದ ಕಾರಣ ಪಂಪ್ ಶೆಡ್ ಸಂಪೂರ್ಣವಾಗಿ ಉರಿದು ಹೋಗಿದೆ. ಬಂಟ್ವಾಳದ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದರು.
ಸಿಡಿಲು ಬಡಿದ ಕಾರಣ ಬೆಂಕಿ ಹೊತ್ತಿಕೊಂಡು ಶೆಡ್ ನಲ್ಲಿ ಇದ್ದ ಮರದ ತುಂಡುಗಳು, ಅಡಿಕೆ ತೆಂಗಿನ ಕಾಯಿ ಸುಟ್ಟುಹೋಗಿವೆ. ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!