Sunday, June 7, 2026
Homeಕರಾವಳಿಬೆಳ್ತಂಗಡಿ: ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದ ಗ್ರಾಮಸ್ಥರು!

ಬೆಳ್ತಂಗಡಿ: ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದ ಗ್ರಾಮಸ್ಥರು!

- Advertisement -
- Advertisement -

ಕಣಿಯೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲೇಜಿಯಿಂದ ಕಲಾಯಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ಕಿಂಡಿ ಅಣೆಕಟ್ಟಿನಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳು ಸಿಲುಕಿದ್ದು, ಊರಿನ ಗ್ರಾಮಸ್ಥರ ಸೂಕ್ತ ಕಾರ್ಯಾಚರಣೆಯಿಂದ ದಿಮ್ಮಿಗಳನ್ನು ತೆರವುಗೊಳಿಸಿ, ನೀರಿನ ಸುಸೂತ್ರ ಹರಿವಿಗೆ ಅನುವು ಮಾಡಿಕೊಡುವ ಮೂಲಕ ಪ್ರವಾಹ ಉಂಟಾಗುಬಹುದಾದ ಪರಿಸ್ಥಿತಿಯನ್ನು ತಪ್ಪಿಸಿದ್ದಾರೆ.

ಗ್ರಾಮಸ್ಥರಾದ ಶ್ರೀಧರ ಪೂಜಾರಿ ತಾರಾಬರಿ, ತಾರಾನಾಥ ಕಲಾಯಿ, ಸುಭಾಸ್ ಕೆ. ಎನ್ ಹಲೇಜಿ, ಸುಧೀರ್ ಕೆ. ಎನ್ ಹಲೇಜಿ, ಸುರೇಶ್ ನಾಣಿಲು, ಯೋಗೀಶ್ ಕಲಾಯಿ, ಜಿತೇಶ್ ತಾರಾಬರಿ, ಸಚಿನ್ ಕಲಾಯಿ, ಮನೋಜ್ ಕಲಾಯಿ,ಹೇಮಂತ್ ಕಲಾಯಿ, ಸೇಸಪ್ಪ ಪೂಜಾರಿ ಕಲಾಯಿ, ನಾರಾಯಣ ಬಂಗೇರ ಹಲೇಜಿ, ನಿಶಾಂತ್ ಭಟ್ ಹಲೇಜಿ ಶ್ರಮದಾನದಲ್ಲಿ ಕಾರ್ಯದಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!