Friday, May 17, 2024
Homeಅಪರಾಧಪುತ್ತೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ...! ರಾಜು ಹೊಸ್ಮಠ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು...!

ಪುತ್ತೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ…! ರಾಜು ಹೊಸ್ಮಠ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು…!

spot_img
- Advertisement -
- Advertisement -

ಪುತ್ತೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ನ ಅಧ್ಯಕ್ಷ ರಾಜು ಹೊಸ್ಮಠ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2019 ರಲ್ಲಿ ಅಪ್ರಾಪ್ತೆ ಬಾಲಕಿ ಮತ್ತು ಆಕೆಯ ತಂಗಿ ರಾಜು ಹೊಸ್ಮಠರವರ ಕಚೇರಿಗೆ ತಂದೆಯೊಂದಿಗೆ ತೆರಳಿದ್ದು, ಈ ವೇಳೆ ರಾಜುರವರ ಪರಿಚಯವಾಗಿದ್ದು, ನಂತರ ಮತ್ತೊಂದು ದಿನ ರಾಜುರವರ ಕಚೇರಿಯಲ್ಲಿ ಅಪ್ರಾಪ್ತೆ ಬಾಲಕಿ ಮತ್ತು ಆಕೆಯ ತಂಗಿಯನ್ನು ಅವರ ತಂದೆ ಬಿಟ್ಟು ಹೋಗಿದ್ರು.

ಆ ವೇಳೆ ರಾಜುರವರು ಅಪ್ರಾಪ್ತೆ ಬಾಲಕಿಯ ತಂಗಿಯನ್ನು ಮತ್ತು ಇನ್ನೊಂದು ಬಾಲಕಿಯನ್ನು ತಿಂಡಿ ತರುವ ನೆಪವೊಡ್ಡಿ, ಅವರನ್ನು ಹೊರಗಡೆ ಕಳಿಸಿದ್ದು, ಈ ಸಂದರ್ಭದಲ್ಲಿ ರಾಜುಹೊಸ್ಮಠ ಆಕೆಯನ್ನು ತನ್ನ ಬಳಿ ಕರೆದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಪ್ರಾಪ್ತ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!