Friday, June 5, 2026
Homeಅಪರಾಧಉಪ್ಪಿನಂಗಡಿ: ನವವಿವಾಹಿತನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!

ಉಪ್ಪಿನಂಗಡಿ: ನವವಿವಾಹಿತನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!

- Advertisement -
- Advertisement -

ಉಪ್ಪಿನಂಗಡಿ : ನವವಿಹಾಹಿತ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿಯ ಕುದ್ರಡ್ಕ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ನಾಸೀರ್ (27) ಎಂದು ಹೇಳಲಾಗಿದೆ. ಯುವಕನ ಮೃತದೇಹವು ಕುದ್ರಡ್ಕ ಕಲ್ಲಿನ ಕೋರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಳೆದ ಆದಿತ್ಯವಾರವಷ್ಟೇ ನಾಸೀರ್ ಗೆ ವಿವಾಹವಾಗಿತ್ತು. ಸ್ಥಳಕ್ಕೆ ಪೂಂಜಾಲಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವವಿವಾಹಿತನ ಮೃತದೇಹ ಪತ್ತೆ ಬೆನ್ನಲ್ಲೇ ಕೊಲೆಯೇ? ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!