Saturday, June 6, 2026
Homeಕರಾವಳಿಬೆಳ್ತಂಗಡಿ: ಕೆಲಸಕ್ಕೆಂದು ಮನೆಬಿಟ್ಟು ಹೋದ ಗೃಹಿಣಿ ನಾಪತ್ತೆ; ದೂರು ದಾಖಲು!

ಬೆಳ್ತಂಗಡಿ: ಕೆಲಸಕ್ಕೆಂದು ಮನೆಬಿಟ್ಟು ಹೋದ ಗೃಹಿಣಿ ನಾಪತ್ತೆ; ದೂರು ದಾಖಲು!

- Advertisement -
- Advertisement -

ಬೆಳ್ತಂಗಡಿ: ಗೃಹಿಣಿಯೊಬ್ಬಳು ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದು ನಂತರ ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಶಿಲ್ಪ ಎಂದು ಗುರುತಿಸಲಾಗಿದೆ. ಮಗುವನ್ನು ಅತ್ತೆಯ ಮನೆಯಲ್ಲೇ ಬಿಟ್ಟು ಅಕ್ಟೊಬರ್ 20 ರಂದು ಕೆಲಸಕ್ಕೆಂದು ಹೋದಾಕೆ ಮತ್ತೆ ಮನೆಗೆ ವಾಪಾಸ್ಸಾಗಲಿಲ್ಲ. ಊರಿನಲ್ಲಿರುವ ವಿವಿಧ ಸಂಘಗಳಲ್ಲಿ ಸಾಲ ಮಾಡಿರುವ ಈಕೆ ಫೇಸ್ ಬುಕ್ ನಲ್ಲಿ ಸಕ್ರೀಯವಾಗಿದ್ದಳು ಎಂದು ಹೇಳಲಾಗಿದೆ. ಮನೆ ಬಿಟ್ಟು ಹೋದ ದಿನ ಪಕ್ಕದ ಮನೆಯವರಿಂದ ಮದುವೆಗೆ ಹೋಗುತ್ತಿದ್ದೆನೆಂದು ಸುಳ್ಳು ಹೇಳಿ ಅವರಿಂದ 3 ಪವನ್ ಕರಿಮಣಿ ಸರವನ್ನು ಪುಸುಲಾಯಿಸಿ ತೆಗೆದುಕೊಂಡು ಹೋಗಿದ್ದಾಳೆ.

ಸದ್ಯ ಈಕೆ ಮಂಡ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇನ್ನಷ್ಟು ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

- Advertisement -

Latest News

error: Content is protected !!