Saturday, June 6, 2026
Homeಅಪರಾಧಕಾಸರಗೋಡು : ಬದಿಯಡ್ಕ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಕಾಸರಗೋಡು : ಬದಿಯಡ್ಕ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

- Advertisement -
- Advertisement -

ಕಾಸರಗೋಡು : ಅ. 18 ರಂದು ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನೋರ್ವನ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಮುಂಡ್ಯತ್ತಡ್ಕ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಮುಂಡ್ಯತ್ತಡ್ಕದ ನಿವಾಸಿ ಜನಾರ್ದನ(34) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಸಾಮಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದ ಜನಾರ್ದನರವರು ಬಳಿಕ ನಾಪತ್ತೆಯಾಗಿದ್ದರು. ಮನೆಗೆ ಬಾರದ್ದನ್ನು ಕಂಡು ಮನೆಯವರು ಶೋಧ ನಡೆಸಿದ್ದರು. ಇಂದು ಬೆಳಗ್ಗೆ ಮನೆಯಿಂದ ಅಲ್ಪ ದೂರದ ಗೇರು ಮರದ ರೆಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಜನಾರ್ದನರ ಮೃತದೇಹ ಪತ್ತೆಯಾಗಿದ್ದಾರೆ.

ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

- Advertisement -

Latest News

error: Content is protected !!