Saturday, June 6, 2026
Homeಕರಾವಳಿಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಮೂವರಿಗೆ ಗಾಯ

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಮೂವರಿಗೆ ಗಾಯ

- Advertisement -
- Advertisement -

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಸೋಮವಾರ ನಡೆದಿದೆ .

ಮೈಸೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾರು ಅಡ್ಕಾರು ಮಾವಿನಕಟ್ಟೆಯ ಬಳಿ ಇರುವ ಪೊಲೀಸ್ ಬ್ಯಾರಿಕೇಡ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತೋಟಕ್ಕೆ ಪಲ್ಟಿಯಾಗಿದೆ.

ಚಾಲಕ ಸೇರಿದಂತೆ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು ,ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದೆ. ಕಾರಿನಲ್ಲಿದ್ದ ಮೈಸೂರಿನ ಶ್ರೇಯಸ್ಸ್, ಭುವನ್ ಹಾಗೂ ಸರ್ವೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!