ಮಂಗಳೂರು: ಗೆಳೆಯರೆಲ್ಲರೂ ಸೇರಿ ಪಂಪ್ವೆಲ್ ಸಮೀಪದ ಲಾಡ್ಜ್ ಒಂದರಲ್ಲಿ ಪಾರ್ಟಿ ಮಾಡುವ ಸಲುವಾಗಿ ಸೇರಿದಾಗ ಇಬ್ಬರ ನಡುವೆ ಜಗಳ ಯುವಕನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಮೃತ ಯುವಕನನ್ನು ಧನುಷ್ (20) ಎಂದು ಗುರುತಿಸಲಾಗಿದೆ. ಈತ ತನ್ನ ನಾಲ್ವರು ಗೆಳೆಯರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಘಟನೆ ನಡೆದಿದೆ.
ಅ.15 ರ ಶುಕ್ರವಾರ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪವೆಲ್ ಬಳಿಯ ಲಾಡ್ಜ್ ಒಂದಕ್ಕೆ ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಪ್ರಜ್ವಲ್ ಎಂಬವರು ತೆರಳಿದ್ದಾರೆ. ಈ ವೇಳೆ ಅ. 16 ರ ಮುಂಜಾನೆ ಸಮಯ ಸುಮಾರು ರಾತ್ರಿ 2 ಗಂಟೆಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಎಂಬುವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಜೇಸನ್ ಸುರತ್ಕಲ್ ಎಂಬಾತನು ತನ್ನಲ್ಲಿರುವ ಹರಿತವಾದ ಆಯುಧದಿಂದ ಧನುಷ್ ಗೆ ಚುಚ್ಚಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ತೀವ್ರವಾಗಿ ಗಾಯಗೊಂಡ ಧನುಷ್ ನನ್ನು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ.