Sunday, June 7, 2026
Homeಕರಾವಳಿಬೆಳ್ತಂಗಡಿ: ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಕಾಲೇಜ್ ವಿದ್ಯಾರ್ಥಿನಿ

ಬೆಳ್ತಂಗಡಿ: ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಕಾಲೇಜ್ ವಿದ್ಯಾರ್ಥಿನಿ

- Advertisement -
- Advertisement -

ಬೆಳ್ತಂಗಡಿ: ಖಿನ್ನತೆಗೊಳಗಾಗಿದ್ದ 22 ವರ್ಷದ ಎಂಕಾಮ್​​ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯ ಹುಣ್ಸೆಕಟ್ಟೆ ಎಂಬಲ್ಲಿ ನಡೆದಿದೆ.

ಹುಣ್ಸೆಕಟ್ಟೆ ನಿವಾಸಿ ಸಂಜೀವ ಶೆಟ್ಟಿ ಮತ್ತು ಜಯಂತಿ ದಂಪತಿಗಳ ಪುತ್ರಿ ದೀಕ್ಷಾ(22) ಮೃತ ಯುವತಿ.

ಸದ್ಯದ ಮಾಹಿತಿ ಪ್ರಕಾರ, ಖಿನ್ನತೆಗೊಳಗಾಗಿರುವ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೀಕ್ಷಾ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಕಾಂ ವ್ಯಾಸಂಗ ಮಾಡುತ್ತಿದ್ದಳು. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ

- Advertisement -

Latest News

error: Content is protected !!