Sunday, May 5, 2024
Homeಅಪರಾಧಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ;ಪ್ಯಾಂಟ್‌ನೊಳಗೆ ಪುಡಿ ರೂಪದಲ್ಲಿ ಅಡಗಿಸಿಟ್ಟಿದ್ದ 14.69 ಲಕ್ಷ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ;ಪ್ಯಾಂಟ್‌ನೊಳಗೆ ಪುಡಿ ರೂಪದಲ್ಲಿ ಅಡಗಿಸಿಟ್ಟಿದ್ದ 14.69 ಲಕ್ಷ ಮೌಲ್ಯದ ಚಿನ್ನ ವಶಕ್ಕೆ!

spot_img
- Advertisement -
- Advertisement -

ಮಂಗಳೂರು: ಬಜ್ಪೆಯ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಪತ್ತೆ ಹಚ್ಚಿದ್ದಾರೆ.

ಚಿನ್ನ ಅಕ್ರಮ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಓರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 14,69,400 ಮೌಲ್ಯದ 310ಗ್ರಾಂ ತೂಕದ ಚಿನ್ನವನ್ನು ಶಾರ್ಜಾದಿಂದ ಇಂಡಿಗೋ ವಿಮಾನದ ಮೂಲಕ ಆಗಮಿಸಿದ ಕೇರಳದ ಕಾಸರಗೋಡಿನ ವ್ಯಕ್ತಿಯಿಂದ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಯಾಣಿಕರು ಧರಿಸಿದ್ದ ಚಾಕೊಲೇಟ್ ಬಣ್ಣದ ಪ್ಯಾಂಟ್ ನೊಳಗೆ ಚಿನ್ನವನ್ನು ಪುಡಿ ರೂಪದಲ್ಲಿ ಮುಚ್ಚಿಡಲಾಗಿತ್ತು.ಈ ಕುರಿತು ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!